ಕಾಲೇಜಿನಲ್ಲಿ ಕೆಟಿಎಂ ಲವ್ ಸ್ಟೋರಿ ಮೂರು ಶೇಡ್ ನಲ್ಲಿ ದೀಕ್ಷಿತ್ ಶೆಟ್ಟಿ ತಮ್ಮ ಪಾತ್ರದಲ್ಲಿ ಮಿಂಚಿದ್ದಾರೆ...ರೇಟಿಂಗ್ :4/5****
Posted date: 18 Sun, Feb 2024 09:45:40 AM

ಲವ್ ಫೇಲ್ಯೂರ್ ಆದ ನಂತರವೂ ಸುಂದರ ಬದುಕನ್ನು ಕಟ್ಟಿಕೊಳ್ಳಬಹುದು ಎಂದು ಹೇಳುವ ಚಿತ್ರ ಕೆಟಿಎಂ. ಟೈಟಲ್‌ನಲ್ಲೇ ಚಿತ್ರದ  ಕಥೆ ಅಡಗಿದೆ. ಅದುಹೇಗೆ  ಎಂಬುದನ್ನು ತೆರೆಮೇಲೆಯೇ  ನೋಡಬೇಕು. ಹೆತ್ತವರ ಪ್ರೀತಿಯ ಮಗನಾದ ಕಾರ್ತಿಕ್ (ದೀಕ್ಷಿತ್ ಶೆಟ್ಟಿ) ಕಾಲೇಜಿನಲ್ಲಿ ಟಾಪ್ ಸ್ಟೂಡೆಂಟ್, ಗೆಳೆಯರ ಜೊತೆ ತುಂಟಾಟ, ತರ್ಲೆ ಮಾಡಿಕೊಂಡಿದ್ದ ಕಾರ್ತಿಕ್ ಊರಿನ  ಸುಂದರ ಯುವತಿ ತಾನ್ಯ(ಕಾಜಲ್ ಕುಂದರ್)ಳನ್ನು ಲವ್ ಮಾಡುತ್ತಾನೆ. ಒಂದು ಹಂತದಲ್ಲಿ ಕಾರ್ತಿಕ್ ಬೆಂಗಳೂರಿಗೆ ಬರುವಂತಾಗುತ್ತದೆ. ಅಲ್ಲೂ ಸಹ ಕಾಲೇಜಲ್ಲಿ  ಟಾಪರ್ ಆದ  ಕಾರ್ತೀಕ್ಗೆ  ಇಷ್ಟಪಡದ ಹುಡುಗಿಯರೇ ಇಲ್ಲ. ನಂತರ  ಅದೇ  ಕಾಲೇಜಿನ  ದಿಟ್ಟ ಹುಡುಗಿ ಮರ್ಸಿ (ಸಂಜನಾ ದಾಸ್) ಪರಿಚಯವಾಗುತ್ತದೆ. ಈ  ನಡುವೆ ಇದೇ ಕಾಲೇಜಿನ ಓಲ್ಡ್ ಸ್ಟೂಡೆಂಟ್  ಲೆಕ್ಚರರಾಗಿ ಕಾಲೇಜಿಗೆ ಬರುತ್ತಾನೆ. ಆತನೂ ಸಹ  ಮರ್ಸಿಗೆ  ಮನಸೋತು  ಪ್ರೊಪೋಸ್ ಮಾಡುತ್ತಾನೆ. ಆದರೆ ಮರ್ಸಿ ತಾನು ಕಾರ್ತಿಕ್ ಲವ್ ಮಾಡುತ್ತಿರುವುದಾಗಿ  ಹೇಳುತ್ತಾಳೆ.

ಮುಂದೆ ಇವರ ಬಾಳಿನಲ್ಲಿ ಮತ್ತೊಂದು ತಿರುವು ಎದುರಾಗುರಾತ್ತದೆ. ಇದರ ನಡುವೆ ಕಾರ್ತಿಕ್  ಕುಡಿತ, ಜೂಜಿಗೆ ದಾಸನಾಗಿ ಪ್ರಾಣವನ್ನೇ  ಕಳೆದುಕೊಳ್ಳುತ್ತಾನೆ. ಪ್ರೀತಿ, ಪ್ರೇಮ, ಸ್ನೇಹ ಎಂದೇ ಆರಂಭವಾಗುವ ಈ ಚಿತ್ರ  ನಂತರ ತನ್ನ ಮಗ್ಗುಲು ಬದಲಿಸುತ್ತದೆ. ಅದೇ ಕಾರಣದಿಂದ `ಕೆಟಿಎಂ` ರೆಗ್ಯುಲ‌ರ್ ಲವ್ ಸ್ಟೋರಿಗಳಿಗಿಂತ ಭಿನ್ನವಾಗಿದೆ ಎನ್ನಬಹುದು.ಇಲ್ಲೂ ನಾಯಕ ಒಂದು ಹಂತಕ್ಕೆ ದೇವದಾಸನಾಗುತ್ತಾನೆ. ಆದರೆ, ನಿರ್ದೇಶಕರು ಅದನ್ನೇ ಮುಂದುವರೆಸದೇ, ಕಥೆಯಲ್ಲೊಂದು ಟ್ವಿಸ್ಟ್‌ ನೀಡಿ, ಮತ್ತೆ ಲವಲವಿಕೆಯಿಂದ ಸಾಗುವಂತೆ ಮಾಡಿದ್ದಾರೆ. ತಾನು ಏನು ಹೇಳುತ್ತಿದ್ದೇನೆ ಮತ್ತು ಅದನ್ನು ಹೇಗೆ ಹೇಳಬೇಕು ಎಂಬ ಸ್ಪಷ್ಟ ಕಲ್ಪನೆ ನಿರ್ದೇಶಕರಿಗಿದ್ದ ಕಾರಣದಿಂದಲೇ `ಕೆಟಿಎಂ` ಹಾದಿ ಸುಗಮ. ಚಿತ್ರದಲ್ಲಿ ಪ್ರೇಮಿಗಳಿಗೆ, ಸ್ನೇಹಿತರಿಗೆ ಹಾಗೂ ಪಾಲಕರಿಗೆ ಒಂದು ಸಣ್ಣ ಸಂದೇಶವನ್ನು ಸಹ  ನೀಡಲಿದೆ.  ನಾಯಕ ದೀಕ್ಷಿತ್ ಶೆಟ್ಟಿ ಇಲ್ಲಿ ಹಲವು ಶೇಡ್‌ ಗಳಲ್ಲಿ ಕಾಣಿಸಿಕೊಂಡಿದ್ದಾರೆ. ಸಂಭಾಷಣೆ ಕೂಡ ಗಮನ ಸೆಳೆಯುತ್ತದೆ.  ಇನ್ನು ನಾಯಕನಾಗಿ ಅಭಿನಯಿಸಿರುವ ದೀಕ್ಷಿತ್ ಶೆಟ್ಟಿ ಮತ್ತೊಮ್ಮೆ ತಮ್ಮ ನಟನ ಸಾಮರ್ಥ್ಯವನ್ನು ನಿರೂಪಿಸಿದ್ದಾರೆ.

ಮೂರು ಶೇಡ್ ಗಳಿರುವ. ಪಾತ್ರಕ್ಕೆ ಜೀವ ತುಂಬಿ ಗೆದ್ದಿದ್ದಾರೆ. ನಾಯಕಿಯಾಗಿ ಅಭಿನಯಿಸಿರುವ ಕಾಜಲ್ ಕುಂದರ್ ಕೂಡ  ಕಣ್ಣಂಚಿನ ನೋಟದಲ್ಲಿ ಮೌನವಾಗಿ ಸೂಕ್ತ ಮಾತುಗಳಿಂದ ಪಾತ್ರಕ್ಕೆ  ನ್ಯಾಯವನ್ನ ನೀಡಿದ್ದಾರೆ. ಹಾಗೆಯೇ ಮತ್ತೊಬ್ಬ ನಾಯಕಿ  ಸಂಜನಾ ದಾಸ್ ಸಿಕ್ಕ ಅವಕಾಶವನ್ನು ಸಮರ್ಥವಾಗಿ ನಿರ್ವಹಿಸಿ ತಮ್ಮ ಪಾತ್ರಕ್ಕೆ ಜೀವ ತುಂಬಿ ಇಡೀ ಚಿತ್ರವನ್ನು ಆವರಿಸಿಕೊಂಡಿದ್ದಾರೆ.

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed